kajavivi@gmail.com   |   0836-2255180

ಪೊಟೊ ಗ್ಯಾಲರಿ

ಪಟ್ಟಾಂಗ

ಆನ್ಲೈನ್ ಪ್ರವೇಶ

ವೀಡಿಯೊ ಗ್ಯಾಲರಿ

ಸಂಯೋಜಿತ ಪದವಿ ಶಿಕ್ಷಣಗಳು

ಅ). ಬಿ.ಬಿ.ಎ. - ಎಂ.ಬಿ.ಎ.
ಜಾನಪದ ಎಂಬುದೇ ಒಂದು ಅಂತರ್ ಶಿಸ್ತೀಯ ಜ್ಞಾನ ಶಾಖೆಯಾದರೂ ಅಂತರ್ ಶಿಸ್ತೀಯ ಜ್ಞಾನ ಶಾಖೆಗಳನ್ನು ಇನ್ನೂ ನಿರ್ದಿಷ್ಟಪಡಿಸಿಕೊಂಡು ಅಧ್ಯಯನಕ್ಕೊಳಪಡಿಸುವ ಉದ್ದೇಶದ ಈಡೇರಿಕೆಗಾಗಿ ಕೆಲವೊಂದು ವಿಷಯಗಳನ್ನು ಸ್ಪಷ್ಟಪಡಿಸಿಕೊಂಡು ಅಧ್ಯಯನ ಮಾಡಬೇಕಾದ ಅಗತ್ಯತೆ ಇಂದು ಹೆಚ್ಚುತ್ತಿದೆ. ಹಾಗಾಗಿ 'ಗ್ರಾಮೀಣ ಅಭಿವೃದ್ಧಿ'ಗೆ ಸಂಬಂಧಿಸಿದಂತೆ ಅಧ್ಯಯನಕ್ಕೆ ಎಡೆಮಾಡಿಕೊಡುವ ಮೂಲಕ ಜಾನಪದವನ್ನು ಆನ್ವಯಿಕಗೊಳಿಸಿಕೊಳ್ಳುವ ಅವಶ್ಯಕತೆಯನ್ನು ಪೂರೈಸುವ ನಿಟ್ಟಿನಲ್ಲಿ ಜಾನಪದ ವಿಶ್ವವಿದ್ಯಾಲಯ ಮಹತ್ವದ ಹೆಜ್ಜೆ ಇರಿಸಿದೆ.
'ಗ್ರಾಮೀಣ ಅಭಿವೃದ್ಧಿ' ಎನ್ನುವ ಜ್ಞಾನ ಶಾಖೆಯನ್ನು ಜಾನಪದದ ಹಿನ್ನೆಲೆಯಿಂದ ನೋಡುವ ಮತ್ತು ಅಧ್ಯಯನ ಮಾಡುವ ಅವಕಾಶ ಜಾನಪದ ವಿಶ್ವವಿದ್ಯಾಲಯದ ಮಹತ್ವದ ಶೈಕ್ಷಣಿಕ ಕಾರ್ಯಕ್ರಮಗಳಲ್ಲೊಂದಾಗಿದೆ.

ಆ). ಬಿ.ಎಸ್ಸಿ - ಎಂ.ಎಸ್ಸಿ
ವಿಜ್ಞಾನ ಮಾನವನ ತಿಳಿವಳಿಕೆಯ ಹಾದಿಯನ್ನು ಸ್ಪಷ್ಟಪಡಿಸಲು ಇರುವ ಬಹಳ ದೊಡ್ಡ ಮಾಧ್ಯಮ. ಆದರೆ ಅದೇ ಶುದ್ಧ ವಿಜ್ಞಾನವು ಅಂತರ್ ಶಿಸ್ತೀಯ ಜ್ಞಾನ ಶಾಖೆಗಳನ್ನು ಹೊಂದಿದ್ದು ಅದರ ಬಗೆಗಿನ ತಿಳಿವಳಿಕೆಯನ್ನು ವಿಸ್ತರಿಸುವ ದಿಶೆಯಲ್ಲಿ ಜಾನಪದ ವಿಶ್ವವಿದ್ಯಾಲಯ ಬಿ.ಎಸ್ಸಿ. - ಎಂ.ಎಸ್ಸಿ. ಪಠ್ಯಕ್ರಮವನ್ನು ಬೋಧಿಸುವ ಮತ್ತು ವರ್ತಮಾನದ ವಿಜ್ಞಾನದಲ್ಲಾಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುವ, ತಿಳಿಯುವ ಸವಾಲಿಗೆ ವಿದ್ಯಾರ್ಥಿಗಳನ್ನು ಒಡ್ಡುವ ಮಹತ್ವದ ಉದ್ದೇಶ ಈ ಕೋರ್ಸ್ ಗಳ ಅಳವಡಿಕೆಯ ಹಿಂದಿದೆ.

ಇ). ಬಿ.ಎ-ಎಂ.ಎ

ಜಾನಪದ ಒಂದು ಕಡ್ಡಾಯ ವಿಷಯವಾಗಿರುವಂತೆ ಐದು ವರ್ಷಗಳ ಸಂಯೋಜಿತ ಪದವಿ ಶಿಕ್ಷಣ (ಮೂರು ವರ್ಷಗಳ ನಂತರ ಸ್ನಾತಕ ಪದವಿ ಪಡೆದು ಹೊರಹೋಗಲು ಅವಕಾಶವಿರುತ್ತದೆ).

ಈ). ಬಿ.ಪಿ.ಎ - ಎಂ.ಪಿ.ಎ.

ಜನಪದ ಪ್ರದರ್ಶನ ಕಲೆಗಳ ವಿಷಯಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ಸಂಯೋಜಿತ ಶಿಕ್ಷಣ (ಮೂರು ವರ್ಷಗಳ ನಂತರ ಸ್ನಾತಕ ಪದವಿ ಪಡೆದು ಹೊರಹೋಗಲು ಅವಕಾಶವಿರುತ್ತದೆ).