kajavivi@gmail.com   |   0836-2255180

ಪೊಟೊ ಗ್ಯಾಲರಿ

ಪಟ್ಟಾಂಗ

ಆನ್ಲೈನ್ ಪ್ರವೇಶ

ವೀಡಿಯೊ ಗ್ಯಾಲರಿ

ನಿಕಾಯ ಹಾಗೂ ವಿಭಾಗಗಳು

ಜನಪದ ಕಲೆ, ಸಂಸ್ಕೃತಿಗಳ ಕುರಿತು, ಸಮಾಜದ ಎಲ್ಲ ಸಮುದಾಯಗಳ ಮೂಲಜ್ಞಾನ ಸಂಗ್ರಹಣೆ, ದಾಖಲೀಕರಣ ಪ್ರಸಾರದ ಆಶಯವನ್ನಿಟ್ಟುಕೊಂಡು, ದೇಸಿ ಜ್ಞಾನಸಂವರ್ಧನೆಗೆ ಸಂಕಲ್ಪ ತೊಡುವ ಮೂಲಕ ಕಾರ್ಯಾನುಷ್ಠಾನಗೊಳಿಸುವ ಕೈಂಕರ್ಯಕ್ಕೆ ಜಾನಪದ ವಿಶ್ವವಿದ್ಯಾಲಯ ಮುಂದಾಗಿದೆ. ಆ ದಿಶೆಯಲ್ಲಿ ಇಂತಹ ಮಹಾತ್ವಾಕಾಂಕ್ಷಿ ಕನಸೊಂದನ್ನು ನನಸು ಮಾಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ದೃಢಹೆಜ್ಜೆ ಇಟ್ಟಿದೆ. ಅದಕ್ಕೆ ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯಕ್ರಮಗಳ ವಿನ್ಯಾಸವೇ ಅದನ್ನು ಸಾಕ್ಷೀಕರಿಸುತ್ತದೆ.

ದೇಸಿ ಕಲೆ, ಸಂಸ್ಕೃತಿಗಳ ಸಂವರ್ಧನೆ ಮತ್ತು ಪ್ರಸಾರ, ಅಧ್ಯಯನ, ಅಧ್ಯಾಪನ, ಸಂಶೋಧನೆ ಇಂತಹ ಶೈಕ್ಷಣಿಕ ಚೌಕಟ್ಟುಗಳಾಚೆಗೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಮಹತ್ವದ ಉದ್ದೇಶಗಳೊಂದಿಗೆ ಸ್ಥಾಪನೆಯಾದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು 2012-13ನೆಯ ಸಾಲಿನಿಂದ ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಕಾರ್ಯಪ್ರವೃತ್ತವಾಗಿದೆ. ಅದರ ಸಂಕ್ಷಿಪ್ತ ವಿವರಣೆ ಈ ಕೆಳಗಿನಂತಿದೆ.
ಜಾನಪದ ವಿಶ್ವವಿದ್ಯಾಲಯದಲ್ಲಿ 8 ನಿಕಾಯಗಳಿದ್ದು, 19 ಅಧ್ಯಯನ ವಿಭಾಗಗಳನ್ನು ಹೊಂದಿದೆ. ಅಲ್ಲದೇ 6 ಅಧ್ಯಯನ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.

 

ನಿಕಾಯಗಳು ವಿಭಾಗಗಳು
1. ಸಾಮಾನ್ಯ ಜಾನಪದ ನಿಕಾಯ 1.1 ಜಾನಪದ ವಿಜ್ಞಾನ ಅಧ್ಯಯನ ವಿಭಾಗ (ಎಂ.ಎ)
2. ಶಾಬ್ದಿಕ ಜಾನಪದ ನಿಕಾಯ 2.1 ಜನಪದ ಸಾಹಿತ್ಯ ಅಧ್ಯಯನ ವಿಭಾಗ (ಎಂ.ಎ)
3. ಜನಪದ ಕಲಾ ಪರಂಪರೆ ನಿಕಾಯ 3.1 ಜನಪದ ಕಲೆಗಳ ಅಧ್ಯಯನ ವಿಭಾಗ (ಎಂ.ಎ)
4. ಪಾರಂಪರಿಕ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ 4.1 ಪಾರಂಪರಿಕ ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನ ವಿಭಾಗ (ಎಂ.ಎಸ್ಸಿ)
5. ಅಲಕ್ಷಿತ ಅಧ್ಯಯನಗಳ ನಿಕಾಯ 5.1 ಗ್ರಾಮೀಣ ಮತ್ತು ಬುಡಕಟ್ಟು ಮಹಿಳೆ ಮತ್ತು ಮಕ್ಕಳ ಅಧ್ಯಯನ ವಿಭಾಗ (ಎಂ.ಎ)
  5.2  ಮಹಿಳಾ ಅಧ್ಯಯನ ವಿಭಾಗ (ಎಂ.ಎ)
  5.3 ಬುಡಕಟ್ಟು ಅಧ್ಯಯನ ವಿಭಾಗ (ಎಂ.ಎ)
6. ಆನ್ವಯಿಕ ಜಾನಪದ ನಿಕಾಯ 6.1 ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣಾ ಅಧ್ಯಯನ ವಿಭಾಗ (ಎಂ. ಬಿ. ಎ)
  6.2 ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗ (ಎಂ.ಎ)
  6.3 ಗ್ರಾಮೀಣ ಮತ್ತು ಬುಡಕಟ್ಟು  ನಿರ್ವಹಣಾ ಅಧ್ಯಯನ ವಿಭಾಗ (ಎಂ. ಬಿ. ಎ)
7. ಸಮಾಜ ವಿಜ್ಞಾನ ನಿಕಾಯ 7.1 ಸಮಾಜಶಾಸ್ತ್ರ ಅಧ್ಯಯನ ವಿಭಾಗ (ಎಂ.ಎ)
  7.2 ಸಮಾಜಕಾರ್ಯ ಅಧ್ಯಯನ ವಿಭಾಗ (ಎಂ ಎಸ್ ಡಬ್ಲ್ಯೂ)
  7.3 ಅರ್ಥಶಾಸ್ತ್ರ ಅಧ್ಯಯನ ವಿಭಾಗ (ಎಂ.ಎ)
8.ಮಾನವಿಕ ನಿಕಾಯ 8.1 ಕನ್ನಡ ಮತ್ತು ಜಾನಪದ ಅಧ್ಯಯನ ವಿಭಾಗ (ಎಂ.ಎ)
  8.2 ಇಂಗ್ಲೀಷ್  ಅಧ್ಯಯನ ವಿಭಾಗ (ಎಂ.ಎ)
  8.3 ದೃಶ್ಯಕಲೆ ಅಧ್ಯಯನ ವಿಭಾಗ (ಎಂ.ವಿ.ಎ)
  8.4 ಪ್ರದರ್ಶನ ಕಲೆ ಅಧ್ಯಯನ ವಿಭಾಗ (ಎಂ.ಪಿ.ಎ)

 

ಸೂಚನೆ: 

ಪ್ರತಿಯೊಂದು ಅಧ್ಯಯನ ವಿಭಾಗವೂ ಸರ್ಟಿಫಿಕೇಟ್, ಡಿಪ್ಲೊಮಾ, ಎಂ.ಎ., ಎಂ.ಎಸ್ಸಿ, ಎಂ.ಬಿ.ಎ., ಎಂ.ಫಿಲ್., ಮತ್ತು ಪಿಎಚ್.ಡಿ., ಮುಂತಾದ ಪದವಿ ಕಾರ್ಯಕ್ರಮಗಳನ್ನು ನೀಡುತ್ತದೆ. ಪಟ್ಟಿ ಲಗತ್ತಿಸಿದೆ.
ಈ ಮೇಲೆ ಕಾಣಿಸಿದ ಪ್ರತಿಯೊಂದು ಅಧ್ಯಯನ ವಿಭಾಗವೂ ನಾಲ್ಕು ಮುಖ್ಯ ಕಾರ್ಯಗಳನ್ನು ಹೊಂದಿರುತ್ತದೆ.
1. ದಾಖಲೀಕರಣ 
2. ಸಂಶೋಧನೆ
3. ಬೋಧನೆ
4. ಆನ್ವಯಿಕತೆ ಹಾಗೂ ಪ್ರಸರಣ ಕಾರ್ಯ

ಕೇಂದ್ರಗಳು:
ಈ ಮೇಲೆ ಪಟ್ಟಿ ಮಾಡಿರುವ ಎಂಟು ನಿಕಾಯಗಳಡಿಯಲ್ಲಿ ಹತ್ತೊಂಬತ್ತು  ಅಧ್ಯಯನ ವಿಭಾಗಗಳನ್ನು ಹೊಂದುವುದರೊಂದಿಗೆ ವಿಶ್ವವಿದ್ಯಾಲಯವು ಆರು ಮಹತ್ವದ ಅಧ್ಯಯನ ಕೇಂದ್ರಗಳನ್ನೂ ಹೊಂದಬಯಸುತ್ತದೆ. ಅವು ಹೀಗಿವೆ:
1. ಆರ್ಕೈವ್ಸ್ ಕೇಂದ್ರ (ದಾಖಲಾತಿ ಭಂಡಾರ)
2. ಜಾನಪದ ವಸ್ತುಸಂಗ್ರಹಾಲಯ ಕೇಂದ್ರ
3. ಭಾಷಾಂತರ ಕೇಂದ್ರ
4. ಜಾನಪದ ವಿಶ್ವಕೋಶ ಕೇಂದ್ರ 
5. ವಿಸ್ತರಣ ಮತ್ತು ಸಲಹಾ ಕೇಂದ್ರ 
6. ಜಾನಪದ ನಿಘಂಟು ಕೇಂದ್ರ